ಭಾರತ-ಪಾಕ್ ವಿಶ್ವಕಪ್ ಸೆಮಿಫೈನಲ್ ಫಿಕ್ಸ್ ಆಗಿತ್ತೇ?
ಲಂಡನ್: ಭಾರತದ ಬುಕ್ಕಿಗಳು ಬಾಲಿವುಡ್ ಚಿತ್ರನಟಿಯೊಬ್ಬಳ ನೆರವಿನೊಂದಿಗೆ ಇಂಗ್ಲೀಷ್ ಕೌಂಟಿ ಚಾಂಪಿಯನ್‌ಷಿಪ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸುತ್ತಿದ್ದಾರೆಯೇ?  ಲಂಡನ್ ಸುದ್ದಿಪತ್ರಿಕೆ ಸಂಡೇ ಟೈಮ್ಸ್ ಮುಖ ಪುಟದ ಲೇಖನದಲ್ಲಿ ಈ ಕುರಿತು ವರದಿ ಮಾಡಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನಡೆದ ಕಳೆದ ಬಾರಿಯ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೂಡ ಕಳ್ಳಾಟ ನಡೆದಿರುವುದಾಗಿ ಪತ್ರಿಕೆ ವರದಿ ಮಾಡಿದೆ. ...ಮುಂದೆ ಓದಿ
ವಕೀಲರ ದಿಢೀರ್ ಮುಷ್ಕರ: ವಾಹನ ಸಂಚಾರ ಅಸ್ತವ್ಯಸ್ತ

ಬೆಂಗಳೂರು: ವಕೀಲ ಬಾಲಕೃಷ್ಣ ಎಂಬುವರ ಮೇಲೆ ತ್ಯಾಗರಾಜನಗರ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಾವಿರಾರು ವಕೀಲರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.  ಏಳು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ  ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡು ವಾಹನ ಚಾಲಕರು ಪರದಾಡಿದರು.

 


...ಮುಂದೆ ಓದಿ
ಐಎಎಸ್ ಅಧಿಕಾರಿಣಿ ಶ್ರೀಲಕ್ಷ್ಮಿ ಜಾಮೀನು ಅರ್ಜಿ ನಿರಾಕರಣೆ
ನವದೆಹಲಿ: ಆಂಧ್ರಪ್ರದೇಶದ ಹಿರಿಯ ಐಎಎಸ್ ಅಧಿಕಾರಣಿ ವೈ. ಶ್ರೀಲಕ್ಷ್ಮಿ ಅವರ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದ್ದರಿಂದ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಇದಕ್ಕೆ ಮುಂಚೆ ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ರದ್ದುಮಾಡಿತ್ತು. ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದುಮಾಡಿ ಜನವರಿ 6ರೊಳಗೆ ಶರಣಾಗುವಂತೆ ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ...ಮುಂದೆ ಓದಿ
ಯಡಿಯೂರಪ್ಪ ಆರೋಪಕ್ಕೆ ಮೌನಿಯಾದ ಈಶ್ವರಪ್ಪ
ಬೆಂಗಳೂರು-ಮತ್ತೆ ಅಧಿಕಾರ ಹಿಡಿಯಲು ಬಿ.ಎಸ್.ಯಡಿಯೂರಪ್ಪನವರ ದಾಹವು ರಾಜಕೀಯ ಬೆಳವಣಿಗೆಗಳಲ್ಲಿ ಗಮನ ಸೆಳೆದಿದೆ. ಮಾಜಿ ಮುಖ್ಯಮಂತ್ರಿ ಜತೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾಧ್ಯಮದ ಎದುರು ತೋಡಿಕೊಳ್ಳದಂತೆ ಈಶ್ವರಪ್ಪ ಅವರಿಗೆ ಆರ್‌ಎಸ್‌ಎಸ್ ಸಂದೇಶ ರವಾನೆಯಾಗಿದೆ.
ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿಸಿದ್ದು ತಾವೆಂಬ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಈಶ್ವರಪ್ಪ ಯೋಜಿಸಿದ್ದರು.
...ಮುಂದೆ ಓದಿ
ಸೋಲರಿಯದ ಸರದಾರ ಬಂಗಾರಪ್ಪ ಅಸ್ತಂಗತ
ಬೆಂಗಳೂರು:ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ, ಹಿಂದುಳಿದ ವರ್ಗಗಳ ನಾಯಕ ಸಾರೇಕೊಪ್ಪ ಬಂಗಾರಪ್ಪ (79)ಅವರು ಸೋಮವಾರ  ನಸುಕಿನ ಜಾವ 12.45ಕ್ಕೆ ನಿಧನರಾಗಿದ್ದಾರೆ. ಬಂಗಾರಪ್ಪ ನಿಧನದಿಂದ ಕರ್ನಾಟಕವು ಅತ್ಯಂತ ಮುತ್ಸದ್ಧಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಿದೆ. ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲಿ ಬಂಗಾರಪ್ಪ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.  ಬಂಗಾರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ...ಮುಂದೆ ಓದಿ
ಗೋವಾ, ಉ.ಪ್ರ. ಪಂಜಾಬ್, ಮಣಿಪುರ, ಉತ್ತರಖಂಡದ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ
ನವದೆಹಲಿ:ಗೋವಾ, ಮಣಿಪುರ, ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಖಂಡಕ್ಕೆ ವಿಧಾನಸಭೆ ಚುನಾವಣೆಗಳು ಜನವರಿ 28ರಿಂದ ಮಾರ್ಚ್ 3ರ ನಡುವೆ ನಡೆಯಲಿವೆ ಎಂದು ಚುನಾವಣೆ ಆಯೋಗ ಶನಿವಾರ ಪ್ರಕಟಿಸಿದೆ. ಉತ್ತರ ಪ್ರದೇಶದಲ್ಲಿ ಫೆ.4ರಿಂದ 28ರವರೆಗೆ 7 ಹಂತಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ...ಮುಂದೆ ಓದಿ
ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಮಂಡನೆ
ನವದೆಹಲಿ:ಪ್ರತಿಪಕ್ಷಗಳ ಸದಸ್ಯರು ಮತ್ತು ನಾಗರಿಕ ಸಮಾಜದ ತೀವ್ರ ಪ್ರತಿಭಟನೆಗಳು ಮತ್ತು ಟೀಕೆಗಳ ನಡುವೆ, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿರುವ ವಿವಾದಾತ್ಮಕ ಲೋಕಪಾಲ ಮಸೂದೆಯನ್ನು ಯುಪಿಎ ಸರ್ಕಾರ ಗುರುವಾರ  ಲೋಕಸಭೆಯಲ್ಲಿ ಮಂಡಿಸಿತು.ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.
 
...ಮುಂದೆ ಓದಿ
ಐಐಎಸ್‌ಸಿ ದಾಳಿಯ 6 ತಪ್ಪಿತಸ್ಥರಿಗೆ ಜೀವಾವಧಿ
ಬೆಂಗಳೂರು:ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 2005ರ ಭಯೋತ್ಪಾದನೆ ದಾಳಿಯಲ್ಲಿ ಭಾಗಿಯಾಗಿ ತಪ್ಪಿತಸ್ಥರಾದ ಎಲ್ಲ 6 ಜನರಿಗೂ ಇಲ್ಲಿನ ತ್ವರಿತ ಗತಿಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ 6ಮಂದಿ ದಾಳಿಯಲ್ಲಿ ಒಳಗೊಂಡ ಹಿನ್ನೆಲೆಯಲ್ಲಿ  ಮತ್ತು ಭಯೋತ್ಪಾದನೆ ಸಂಘಟನೆ ಲಷ್ಕರೆ ತೊಯ್ಬಾ ಜತೆ ಸಂಪರ್ಕ ಹೊಂದಿರುವುದಿಂದ ತಪ್ಪಿತಸ್ಥರಾಗಿದ್ದಾರೆ.ಆದರೆ ಒಳಸಂಚಿನ ಆರೋಪ ಎದುರಿಸುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕೋರ್ಟ್ ಖುಲಾಸೆ ಮಾಡಿದೆ. ...ಮುಂದೆ ಓದಿ
ಬೆಳಗಾವಿ ಮಹಾನಗರ ಪಾಲಿಕೆ ಸೂಪರ್‌ಸೀಡ್
ಭೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯ ಸರ್ಕಾರ ಗುರುವಾರ ವಿಸರ್ಜಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ವಿಧಾನಮಂಡಲದ ಉಭಯ ಸದನಗಳಲ್ಲಿ ಈ ವಿಷಯ ಪ್ರಕಟಿಸಿದರು.
`ಕನ್ನಡ ರಾಜ್ಯೋತ್ಸವ ದಿನದಂದೇ ಎಂಇಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಮೇಯರ್ ಮಂದಾ ಬಾಳೇಕುಂದ್ರಿ ಮತ್ತು ಉಪ ಮೇಯರ್ ರೇಣು ಕಿಲ್ಲೇಕರ ಪಾಲ್ಗೊಂಡಿರುವುದು ಸೇರಿದಂತೆ ಹತ್ತು ಹಲವು ಸಂದರ್ಭಗಳಲ್ಲಿ ಕನ್ನಡಕ್ಕೆ ಅಪಮಾನ ಮಾಡಿರುವ ಆರೋಪಗಳಿದ್ದ ಹಿನ್ನೆಲೆಯಲ್ಲಿ ಪಾಲಿಕೆಯನ್ನು ವಿಸರ್ಜಿಸುವ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಂಡರು.
...ಮುಂದೆ ಓದಿ
ಕಳ್ಳಬಟ್ಟಿ ದುರಂತಕ್ಕೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆ
ಕೋಲ್ಕೊತಾ-ರಾಜ್ಯದ ಅತ್ಯಂತ ಭೀಕರವಾದ ಕಳ್ಳಬಟ್ಟಿ ದುರಂತದಲ್ಲಿ ಶುಕ್ರವಾರ ಇನ್ನೂ 19 ಜನರು ಬಲಿಯಾಗುವುದರೊಂದಿಗೆ ಸತ್ತವರ ಒಟ್ಟು ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಅನೇಕ ಮಂದಿಯ ದುರ್ದೈವಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನಷ್ಟು ಜನರು ಸಾವಿಗೀಡಾಗುವ ಭಯ ಆವರಿಸಿದೆ. ಕಾರ್ಮಿಕರು, ರಿಕ್ಷಾ ಎಳೆಯುವವರೇ ಹೆಚ್ಚಾಗಿ ಈ ದುರಂತಕ್ಕೆ ಬಲಿಯಾಗಿದ್ದಾರೆ.
 ಡೈಮಂಡ್ ಹಾರ್ಬರ್ ಆಸ್ಪತ್ರೆಯಲ್ಲಿ ಸುಮಾರು 90 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಯಾ ಕುಟುಂಬಗಳ ವಶಕ್ಕೆ ದೇಹಗಳನ್ನು ಒಪ್ಪಿಸಲಾಗಿದೆ
...ಮುಂದೆ ಓದಿ
ನವದೆಹಲಿ-ಯುಪಿಎ ಮುಖಂಡರ ಸಭೆಯಲ್ಲಿ ಲೋಕಪಾಲ್ ಮಸೂದೆ ಕುರಿತು ಸ್ಪಷ್ಟ ಒಮ್ಮತ ಮೂಡಿದ್ದು, ಮಸೂದೆ ಅನುಮೋದನೆಗಿರುವ ಮೊದಲ ತೊಡಕು ನಿವಾರಣೆಯಾಗಿದೆ. ಮಸೂದೆಯ ಪ್ರಮುಖ ವಿಷಯಗಳ ಬಗ್ಗೆ ವಿಶಾಲ ಒಮ್ಮತ ಮೂಡಿದೆ ಎಂದು ಸಭೆಯಿಂದ ಹೊರಬಂದ ಗೃಹಸಚಿವ ಚಿದಂಬರಂ, ಮಾತುಕತೆಗಳು ಉಪಯುಕ್ತವಾಗಿವೆ ಎಂದು ಬಣ್ಣಿಸಿದರು ...ಮುಂದೆ ಓದಿ


ಲೋಕಪಾಲ್ ಮಸೂದೆ: ಯುಪಿಎ ಸಭೆಯಲ್ಲಿ ಒಮ್ಮತ
ಮೇಲ್ಮನೆ ಚುನಾವಣೆಗೆ ಮುಖ್ಯಮಂತ್ರಿ ನಾಮಪತ್ರ
ಗಣಿ ಕುಣಿಕೆ: ಕೃಷ್ಣ ರಾಜೀನಾಮೆಗೆ ಬಿಜೆಪಿ ಆಗ್ರಹ
ತರಂಗಗುಚ್ಛ ಹಗರಣ: ಸಾಕ್ಷಿಯಾಗಲು ಸ್ವಾಮಿಗೆ ಅವಕಾಶ
ಲೋಕಪಾಲ ವರದಿಗೆ ಸ್ಥಾಯಿ ಸಮಿತಿ ಅಸ್ತು
ಭದ್ರತಾ ಸಿಬ್ಬಂದಿಯನ್ನು ಕಾರಿನಲ್ಲಿ ತುಂಬಿಕೊಂಡು ಹೋದ ಸಿದ್ದು
ಶ್ರೀರಾಮುಲು ಗೆಲುವು ಬಿಜೆಪಿಗೆ ಮುಳುವಾಗಲಿದೆಯೇ?
ಅಕ್ರಮ ಗಣಿಗಾರಿಕೆ ಕುಣಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ತ್ರಯರು
ಚಿಲ್ಲರೆ ವಲಯದಲ್ಲಿ ಎಫ್‌ಡಿಐ: ಪ್ರತಿಪಕ್ಷಗಳಿಂದ ಗದ್ದಲ
ನ್ಯಾಟೊ ದಾಳಿ: ಪಾಕ್‌ನಲ್ಲಿ ಮಡುಗಟ್ಟಿದ ಆಕ್ರೋಶ
ಮನರಂಜನೆ
ಮುಂಬೈ-ಹಿಂದಿ ಚಿತ್ರರಂಗದ ಎವರ್‌ಗ್ರೀನ್ ಹೀರೊ ಎಂದೇ ಜನಜನಿತರಾಗಿದ್ದ ದೇವಾನಂದ ತೀವ್ರ ಹೃದಯಾಘಾತದಿಂದ ಲಂಡನ್ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ದೇವಾನಂದ್ ಅವರಿಗೆ 88 ವರ್ಷ ವಯಸ್ಸಾಗಿತ್ತು.  ಅವರ ಅಭಿಮಾನಿಗಳು ಮತ್ತು ಹಿತೈಷಿಗಳ ನೆನಪಿನಲ್ಲಿ ದೇವಾನಂದ್ ಅವರ ಗೀತೆ ಹನ್ ದೋನೊದ '"ಅಭಿ ನಾ ಜಾವೊ ಚೋಡ್ಕರ್ ಕೆ ದಿನ್ ಅಭಿ ಭಾರಾ ನಹೀನ್" ಸಾಲಿನ ಪಲ್ಲವಿ ಈಗಲೂ ಹಚ್ಚಹಸುರಾಗಿ ಉಳಿದಿದೆ. ...ಮುಂದೆ ಓದಿ


ಎವರ್ ಗ್ರೀನ್ ಹೀರೊ ದೇವಾನಂದ್ ಇನ್ನಿಲ್ಲ
ಐಶ್ವರ್ಯ ರೈಗೆ ಹೆಣ್ಣು ಮಗು
ಮೊಮ್ಮಗಳ ಚಿತ್ರ ಕಳಿಸಲು ಬಿಗ್ ಬಿ ನಿರಾಕರಣೆ
ಪಾರ್ನ್ ತಾರೆ ಸನ್ನಿ ಲಿಯೋನ್ ಬಿಗ್‌ಬಾಸ್ 5ಗೆ ಎಂಟ್ರಿ
ಅಣ್ಣಾವರ ಬಗ್ಗೆ ತಿಳಿಯಲು ಡಿವಿಡಿ ವೀಕ್ಷಿಸಿ
ಶೈನಿ ವಿರುದ್ಧ ಲೈಂಗಿಕ ಕಿರುಕುಳದ ಮತ್ತೊಂದು ಆರೋಪ
ಓಪ್ರಾ ವಿನ್‌ಫ್ರೇ ಮನರಂಜನೆ ಲೋಕದಲ್ಲಿ ಅತ್ಯುನ್ನತ ಗಳಿಕೆ
ತಾಯ್ನಾಡಿಗೆ ಮರಳಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್
ಮಹೇಕ್ ಚಹಾಲ್‌ಗೆ ಬಿಗ್ ಬಾಸ್ ಅವಕಾಶ
ಬಿಪಾಶಾ-ರಾಣಾ ಗುಪ್ತ್ ಗುಪ್ತ್
 
ವಿಜ್ಞಾನ
ಪ್ಯಾರಿಸ್-ಭೂಮಿಯ ಬಹುತೇಕ ಸಾಗರಗಳು ಧೂಮಕೇತುಗಳಿಂದ ಉಂಟಾಗಿರಬಹುದು ಎಂದು ಜರ್ನಲ್ ನೇಚರ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ತಿಳಿಸಿದೆ. ಬಿಲಿಯಾಂತರ ವರ್ಷಗಳ ಹಿಂದೆ ಈ ಧೂಮಕೇತುಗಳು ಶೈಶವಾವಸ್ಥೆಯಲ್ಲಿದ್ದ ಭೂಮಿಗೆ ಅಪ್ಪಳಿಸಿ, ನೀರ್ಗಲ್ಲಿನ ಗುಡ್ಡೆಯನ್ನು ರಾಶಿ ಹಾಕಿದವು ಎಂದು ಅದರಲ್ಲಿ ತಿಳಿಸಲಾಗಿದೆ.ನೀರಿನಲ್ಲಿ ಅತ್ಯಧಿಕ ಜಲಜನಕದ ಅನುಪಾತ ಇರುವುದು ಅದಕ್ಕೆ ಸಾಕ್ಷ್ಯವೊದಗಿಸಿದೆ. ಯುರೋಪ್‌ನ ಹರ್ಸ್‌ಚಲ್ ಬಾಹ್ಯಾಕಾಶ ದೂರದರ್ಶಕದಲ್ಲಿ ಅವರೋಹಿತ
ಉಪಕರಣವು 103ಪಿ/ಹಾರ್ಟ್ಲಿ 2 ಎಂಬ ಧೂಮಕೇತುವಿನಲ್ಲಿರುವ ಹಿಮದ ವಿಶ್ಲೇಷಣೆ ನಡೆಸಿದಾಗ, ಭೂಮಿಯ ನೀರಿನಲ್ಲಿರುವಷ್ಟು ಸಮಾನ ಡ್ಯುಟೀರಿಯಂ ಅನುಪಾತವನ್ನು ಅದರಲ್ಲಿ ಹೊಂದಿರುವುದು ಪತ್ತೆಯಾಗಿದೆ.
...ಮುಂದೆ ಓದಿ


ಧೂಮಕೇತುಗಳ ಅಪ್ಪಳಿಸುವಿಕೆಯಿಂದ ಭೂಮಿಯಲ್ಲಿ ಸಾಗರ?
ಮೀನಿನ ಎಣ್ಣೆ ಸೇವನೆಯಿಂದ ಮಕ್ಕಳ ಬುದ್ಧಿಮತ್ತೆಯಲ್ಲಿ ವ್ಯತ್ಯಾಸವಿಲ್ಲ
 
 
 
School Bangalore
 
SareeBangalore
 
Jewellerybangalore
 
 
your
advertisement
Here